Sunday, July 1, 2007

ಇದು ನಮ್ಮ-ನಿಮ್ಮ ಪಿಸುಮಾತು!


ಪಿಸುಮಾತು-ನಗೆಯಿಲ್ಲದ ಜೀವನವುಂಟೇ? ನಾವು ಎಷ್ಟೇ ಜೋರಾಗಿ ಮಾತಾಡಿದರೂ ಪಿಸುಮಾತಿನ ಸೊಗಸೇ ಬೇರೆ. ನೋವು-ನಲಿವುಗಳ ಬದುಕಿನ ಯಾನದಲ್ಲಿ ಪಿಸುಮಾತುಗಳಿಲ್ಲದ ಜೀವನವೇ ಒಣಮಾತು-ಅರ್ಥಹೀನ ಎನಿಸಿಬಿಡುತ್ತದೆ.


ಪಿಸುಮಾತು ಮೆಲ್ಲನೆ ಕಿವಿಯಲ್ಲಿ ಉಸುರಿಬಿಡುವುದಷ್ಟೇ ಅಲ್ಲ. ಅದು ಹೃದಯ-ಹೃದಯಗಳ, ಮಿದುಳು-ಮಿದುಳುಗಳ ನಡುವೆ ನಡೆವ ಮೌನ ಸಂವಾದವೂ ಹೌದು.


ಇನ್ನು ನಗೆಯೂ ಅಷ್ಟೇ... ಅದೂ ಸರ್ವಾಂತರ್ಯಾಮಿ. ಸುಖಕ್ಕೋ-ದುಃಖಕ್ಕೋ, ನೊಂದೋ-ನೋಯಿಸಿಯೋ, ಸ್ನೇಹಕ್ಕೋ, ವೈರಕ್ಕೋ ನಗುತ್ತಲೇ ಇರುತ್ತೇವೆ. ನಗೆಯಲ್ಲಿ ಹಲವು ಬಗೆ. ಆದರೆ ಕೆಟ್ಟವರಾಗಿಯೋ, ಒಳ್ಳೆಯವರಾಗಿಯೋ ಒಟ್ಟಿನಲ್ಲಿ ಬದುಕಿನುದ್ದಕ್ಕೂ ನಗುತ್ತಲೇ ಇರುತ್ತೇವೆ.


ಬನ್ನಿ, ನಗುತ್ತ-ಪಿಸುಮಾತುಗಳನ್ನಾಡುತ್ತಾ ಬದುಕನ್ನು ಹಗುರಗೊಳಿಸಿಕೊಳ್ಳೋಣ-ಸಹನೀಯಗೊಳಿಸಿಕೊಳ್ಳೋಣ...